ಮುಳಬಾಗಿಲು ತಾಲೂಕಿನ ಪ್ರಸಕ್ತ ಆಡಳಿತರೂಢ ಶಾಸಕಾಂಗ ಹಾಗೂ ಕಾರ್ಯಾಂಗ: ಜವಾಬ್ಧಾರಿಯುತ ನಾಗರಿಕರು, ಇನ್ನಾದರೂ ಎಚ್ಚೆತ್ತುಕೊಳ್ಳಿ?

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮೌನ ವಹಿಸಿದರೆ ನಿಮ್ಮ ಮನೆಯ ರಕ್ಷಣೆ ಹೇಗೆ ಮಾಡುತ್ತೀರಿ? ಕನಿಷ್ಠ ಜ್ಞಾನವನ್ನು ನಾವು ತಿಳಿದು ಮತ್ತಷ್ಟು ಜನಕ್ಕೆ ಹಂಚಿದಾಗ ಮಾತ್ರ ಪರಿವರ್ತನೆ... , ಸಮಾಜದ ಬದಲಾವಣೆಗೆ ಸಾಧ್ಯವಾಗುವ ಏಕೈಕ ಅಸ್ತ್ರ ಎಂದರೆ ಜ್ಞಾನ ಹೊರೆತು ರಾಜಕೀಯ ಪಕ್ಷ ಅಥವಾ ಜಾತಿ ಧರ್ಮ ವ್ಯವಸ್ಥೆಯ ಕಪ್ಪು ಹಣ ಅಲ್ಲ

Rohan Kumar K

8/21/20241 min read

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಮೌನ ವಹಿಸಿದರೆ ನಿಮ್ಮ ಮನೆಯ ರಕ್ಷಣೆ ಹೇಗೆ ಮಾಡುತ್ತೀರಿ?

ಕನಿಷ್ಠ ಜ್ಞಾನವನ್ನು ನಾವು ತಿಳಿದು ಮತ್ತಷ್ಟು ಜನಕ್ಕೆ ಹಂಚಿದಾಗ ಮಾತ್ರ ಪರಿವರ್ತನೆ... , ಸಮಾಜದ ಬದಲಾವಣೆಗೆ ಸಾಧ್ಯವಾಗುವ ಏಕೈಕ ಅಸ್ತ್ರ ಎಂದರೆ ಜ್ಞಾನ ಹೊರೆತು ರಾಜಕೀಯ ಪಕ್ಷ ಅಥವಾ ಜಾತಿ ಧರ್ಮ ವ್ಯವಸ್ಥೆಯ ಕಪ್ಪು ಹಣ ಅಲ್ಲ...

ಮುಳಬಾಗಿಲು ತಾಲೂಕಿಗೆ ಸದ್ಯ ಮೂಲಭೂತ ಸುರಕ್ಷತಾ ವ್ಯವಸ್ಥೆಗೆ ಕಣ್ಣಿಗೆ ಕಾಣುವಂತೆಯೇ ಜೊತೆ ಬಂದಿದೆ, ಪ್ರಶಕ್ತ ಸ್ಥಿರವಾದ ರಾಜಕೀಯ ವ್ಯವಸ್ಥೆಯು ಇರುವುದಿಲ್ಲ ಎಂಬುದು ವರುಷಗಳಿಂದ ಸಾಮಾನ್ಯ ನಾಗರಿಕನಿಗೂ ತಿಳಿಯುವಂತಹ ವಿಷಯವಾಗಿದೆ. ರಾಜಕೀಯ ಪಕ್ಷಗಳಲ್ಲಿನ ನಾಯಕರ ದುರ್ನಡತೆ ಮತ್ತು ದುರಾಡಳಿತದ ಹಾಗೂ ನೈತಿಕತೆ ಇಲ್ಲದ ರಾಜಕೀಯ ನಡೆ ಗಳಿಂದ ಹತ್ತಿರವಾದ ರಾಜಕೀಯ ಪಾಲಿಸುವ ಮೂಲ ಕಾರ್ಯಕರ್ತರಿಗೆ ಶಾಸಕರುಗಳಿಗೆ ಪ್ರಶ್ನಾರ್ಥಕ ಪರಿಸ್ಥಿತಿ ಒದಗಿ ಬಂದಿದೆ. ಈಗ ಸದ್ಯ ಪವರ್ ಟಿವಿ ಮಾಧ್ಯಮದಿಂದ ಸಾರ್ವಜನಿಕರಿಗೆ ತಲುಪಿದ ರಾಷ್ಟ್ರಮಟ್ಟದ ನಾಯಕ ಹಾಗೂ ರಾಜ್ಯದ ಸ್ಥಳೀಯ ಪಕ್ಷಗಳ ಪೈಕಿ ಬಹಳ ಹೆಸರಿದ್ದ ಪಕ್ಷದ ನಾಯಕರ ಭೂಗಳ್ಳತನದ ಹಾಗೂ ಅಯೋಗ್ಯತನದ ವಿಚಾರಗಳು ಸಮಾಜದಲ್ಲಿ ಇನ್ನೊಮ್ಮೆ ರಾಜಕೀಯ ಕ್ಷೇತ್ರದಲ್ಲಿ ಪರಿವರ್ತನೆಗಳು ಬರಲೇಬೇಕು ಎಂಬ ಸೂಚನೆಯನ್ನು ಕೊಟ್ಟಿದೆ.

ಮುಳಬಾಗಿಲು ತಾಲೂಕಿನಲ್ಲಿ ಮೊನ್ನೆ ನಡೆದ ಶಿಕ್ಷಕಿಯ ಬರ್ಬರ ಹತ್ಯೆ ಆಗಿರಬಹುದು, ಪುಟಾಣಿ ಕಂದಮ್ಮನ ಪೋಕ್ಸೋ ಕಾಯ್ದೆಯ ಪ್ರಕರಣ ಇರಬಹುದು, ಶಿಕ್ಷಣ ವಲಯದ ಶಿಕ್ಷಕ ಶಿಕ್ಷಕಿಯರಿಗೆ ನೇರವಾಗಿ ಕಾನೂನಿನ ಮೊರೆ ಹೋಗುವ ಧೈರ್ಯ ಕಳೆದುಕೊಂಡಿರುವಂತಹ ಪ್ರಸಂಗಗಳ ವಿಷಯವೇ ಇರಬಹುದು, ನಗರದಲ್ಲಿ ನೇರ ನೇರ ನಡೆಯುತ್ತಿರುವ ಬರ್ಬರ ಕೊಲೆಗಳು ಇರಬಹುದು ... ಇನ್ನೂ ಮರೆಯಲಾಗದ ಕೌನ್ಸಿಲರ್ ಒಬ್ಬರ ಭೀಕರ ಕೊಲೆ ಇರಬಹುದು ಹಾಗೂ ಇದೇ ರೀತಿ ಮತ್ತೊಬ್ಬ ಕೌನ್ಸಿಲರ್ ನ ಕೊನೆ ಯತ್ನ ಇರಬಹುದು. ಇಷ್ಟೆಲ್ಲ ಪ್ರಕರಣಗಳು ಸರ್ವೇಸಾಮಾನ್ಯ ತಾಲೂಕಿನ ಎಲ್ಲರಿಗೂ ತಿಳಿದಿದೆ ಹಾಗೂ ಶಾಸಕಾಂಗ ವ್ಯವಸ್ಥೆಗೂ ಖಂಡಿತವಾಗಿಯೂ ತಿಳಿದಿರಲೇಬೇಕು.

ಈ ಎಲ್ಲ ವಿಷಯಗಳಿಗೆ ಅಥವಾ ಪ್ರಕರಣಗಳಿಗೆ ಮೂಲ ಕಾರಣವನ್ನು ಒಮ್ಮೆ ಯೋಚನೆ ಮಾಡಿ, ದುಡ್ಡಿಗಾಗಿ ವೋಟನ್ನು ಮಾರಿಕೊಳ್ಳುವ ಬಂಧು ಮಿತ್ರರಿಗೆ ಒಂದು ದೊಡ್ಡ ನಮಸ್ಕಾರ... ನಿಮಗಿದು ತಿಳಿದಿರಲಿ, ಕೊಲೆ ಮಾಡುವ ಯಾರೆ ಇರಲಿ ಅಥವಾ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಅಥವಾ ದೌರ್ಜನ್ಯ ಮಾಡುವ ಯಾರೆ ಇರಲಿ... ಅಂತಹ ವ್ಯಕ್ತಿಗಳು ಸಮಾಜದಲ್ಲಿ ಆಡಳಿತದ ಶಕ್ತಿ ಇಲ್ಲದಿರುವುದನ್ನು ಗಮನಿಸಿ, ಎಲ್ಲೆಡೆಯೂ ಹೆಚ್ಚಿನ ಮಂದಿ ಹಣಕ್ಕಾಗಿ ಸಮಾಜವನ್ನು ಮತ್ತು ಸಂವಿಧಾನವನ್ನು ಮಾರಿಕೊಳ್ಳುವ ಜನರ ಇರುವಿಕೆಯನ್ನು ತಿಳಿದು ತಪ್ಪು ಮಾಡಲು ಮುಂದಾದಾಗ, ಅವರು ದುಡ್ಡು ಪಡೆದು ಮತ ಹಾಕಿದ್ದಾರೆ ಅಥವಾ ದುಡ್ಡು ಪಡೆದು ಸಮಾಜವನ್ನು ನಮ್ಮಂತಹ ಪಾಪಿಗಳಿಗೆ ಬಿಟ್ಟಿರುತ್ತಾರೆ ಎಂದು ಅನುಕಂಪದಿಂದ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಅಥವಾ ಸಮಾಜದ ತೂಕ ಚಟುವಟಿಕೆಯನ್ನು ನಿಮ್ಮ ಮಕ್ಕಳೊಂದಿಗೆ ಅಥವಾ ಕುಟುಂಬದೊಂದಿಗೆ ಮಾಡುವುದಿಲ್ಲ ಎಂದು ಏನು ಇಲ್ಲ. ಬದಲಿಗೆ ಮುಲಾಜಿ ಇಲ್ಲದೆ ಸಂವಿಧಾನ ಮತ್ತು ಸ್ವಾಭಿಮಾನವನ್ನು ಮಾರಿಕೊಂಡ ಜನರ ಮಕ್ಕಳೆ ಇರಲಿ ಅಥವಾ ಸಜ್ಜನಿಕೆಯಿಂದ ನಾನೇ ಉತ್ತಮ ಎಂದು ಕಣ್ಮುಂದೆ ತಪ್ಪುಗಳು ನಡೆಯುತ್ತಿದ್ದರೂ ಮೌನವಹಿಸಿ ತಮ್ಮ ಸ್ಥಿತಿಗೆ ತಾವು ಜೀವನ ನಡೆಸುತ್ತಿರುವ ಅನೇಕ ಸತ್ತ ಪ್ರಜೆಗಳೇ ಇರಲಿ... ಲಜ್ಜೆ ಇಲ್ಲದೆ ಹೇಡಿ ಸಮಾಜವೆಂದು ತಿಳಿದು, ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಅವಕಾಶ ಸಿಕ್ಕರೆ ಬಲಾತ್ಕಾರಗೊಳಿಸಿ , ಕೊಲೆ ಮಾಡುವರು ಅಥವಾ ನಿಮ್ಮ ಮನೆಗೆ ಬಂದು ಕಾನೂನು ವ್ಯವಸ್ಥೆಯ ಭಯವಿಲ್ಲದೆ ನಿಮ್ಮನ್ನು ದೋಚಿ ಪ್ರಾಣ ಹಾನಿ ಮಾಡುವವರು. ಈ ಒಂದು ವಿಮರ್ಶೆ ಸರಿ ಇರಬಹುದು, ಅಥವಾ ಮುಂಬರುವ ಭವಿಷ್ಯದ ಸಮಾಜದ ಮುನ್ಸೂಚನೆ ಇರಬಹುದು.

ಒಮ್ಮೆಯಾದರೂ ಯೋಚಿಸಿ, ಒಂದು ವೇಳೆ ನೀವು ಅಂದರೆ ಸಜ್ಜನರು ಮತ್ತು ಧೈರ್ಯವುಳ್ಳ ನಾಗರಿಕರು ಸಮಾಜ ಹಿತಕ್ಕಾಗಿ ರಾಜಕೀಯ ಪರಿವರ್ತನೆಯನ್ನು ಮಾಡಲು ಮುಂದೆ ಬಂದರೆ ಹಾಗೂ ಅಂತಹ ನಾಯಕರುಗಳನ್ನು ಸಂವಿಧಾನವನ್ನು ಮತ್ತು ಸ್ವಾಭಿಮಾನವನ್ನು ಮಾರಿಕೊಳ್ಳದೆ ತಮ್ಮ ತಾಯಿಯಂತೆ ಸಂವಿಧಾನವನ್ನು ಗೌರವಿಸುವ ಚಿಂತನೆಯನ್ನು ಸಮಾಜ ಕಲಿತರೆ , ಖಂಡಿತವಾಗಿಯೂ ಈ ರೀತಿಯ ಪ್ರಸಕ್ತ ಇರುವ ವಾತಾವರಣ ಮುಂದೆ ಬರುವುದಿಲ್ಲ.

ನಮ್ಮ ತಾಲೂಕಿಗೆ ಮೊದಲು ರಾಷ್ಟ್ರೀಯ ಮತ್ತು ಕ್ರಾಂತಿಯ ಪಕ್ಷಗಳ ಹೆಸರುಗಳನ್ನು ಬಳಸಿಕೊಂಡು ಅಭ್ಯರ್ಥಿಗಳಾಗಿ ಬರುವ ಅದೆಷ್ಟೋ ಮಂದಿ ಮೂಲ ಉದ್ದೇಶವೇ , ತಾಲೂಕಿನಲ್ಲಿ ಹಣ ಇದ್ದರೆ ಹೇಗಾದರೂ ಗೆಲ್ಲಬಹುದು ಹಾಗೂ ಕುದುರೆ ವ್ಯಾಪಾರ ಜೋರು ಮಾಡಬಹುದು ಎಂಬ ಉದ್ದೇಶದಿಂದ ಬರುತ್ತಾರೆ. ಅದಕ್ಕೆ ಪೂರಕವೆಂಬಂತೆ ಇಲ್ಲಿನ ಜನರನ್ನು ನಂಬಿಸಿ ನಾಯಕರು ಎಂದು ಹೇಳಿಕೊಳ್ಳುವ ಸೋಗಲಾಡಿಗಳು ಜನರಿಂದಲೇ ಬೆಳೆಯುವ ಪಕ್ಷಗಳನ್ನು ಜನರಿಗಿಂತ ದೊಡ್ಡವರು ಎಂದು ತೋರಿಸುವಂತೆ ಸ್ವಾಭಿಮಾನವನ್ನು ಮರೆತು ಪಕ್ಷಗಳು ಹೇಳಿದ ರೀತಿಯಲ್ಲಿ ನಾಯಿಗಳಂತೆ ವರ್ತಿಸುತ್ತಾರೆ. ಇದಕ್ಕೆ ಕಾರಣ ನಾಯಕರು ಎಂಬುವವರು ಜನರ ಪರವಾಗಿ ನಿಲ್ಲುವಂತಹ ಮತ್ತು ನಾಯಕತ್ವಗಳನ್ನು ಬೆಳೆಸುವ ವಿಷಯದಲ್ಲಿ ನಂಬಿಕೆ ಇಲ್ಲದೆ ಎಷ್ಟೇ ವರ್ಷವಾದರೂ ಅವರೇ ನಾಯಕರು ಎಂಬ ಭಾವನೆ ಅಡಿಯಲ್ಲಿ ಬಾವಿಯಲ್ಲಿನ ಕಪ್ಪೆಯಂತೆ ಬದುಕುತ್ತಿರುವ ವಿಷಯವೇ ಇದಕ್ಕೆ ಮೂಲ. ಇಂತಹ ಪರಿಸ್ಥಿತಿಗಳಲ್ಲಿ ಸಾಮಾನ್ಯ ಜನರು 5 ವರ್ಷಕ್ಕೆ ಒಮ್ಮೆ ತಮಗೆ ಸಿಗುವ ರಾಷ್ಟ್ರವನ್ನು ಬದಲಾಯಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಸುಗಮ ಹಾದಿಯನ್ನು ನಿರ್ಮಾಣ ಮಾಡುವ ಒಂದೇ ಒಂದು ಅವಕಾಶವನ್ನು ಸಹ ಸದುಪಯೋಗಪಡಿಸಿಕೊಳ್ಳಲು ಆಗುವುದಿಲ್ಲ ಎಂಬುದು ಮುಳಬಾಗಿಲು ರಾಜಕೀಯ ವಿಮರ್ಶಿಸಿದಾಗ ತಿಳಿಯುತ್ತದೆ.

ಇನ್ನು ಮೊದಲು ನಾನು ಇಲ್ಲೇ ಇರುವೆ ಜನರೊಂದಿಗೆ ಇರುವೆ ಎಂದು ಹೇಳುವ ಯಾವುದೇ ಶಾಸಕ ಆಗಲಿ, ಗೆದ್ದ ನಂತರ ಅವನು ಅಪ್ಪಿ ತಪ್ಪಿ ಸಹ ಸುತ್ತಮುತ್ತಲು ಕಾಣಿಸುವುದಿಲ್ಲ, ಅದೇ ರೀತಿ ಪ್ರಸಕ್ತ ಶಾಸಕರನ್ನು ಪ್ರಶ್ನಿಸುವ ವಿರೋಧ ಪಕ್ಷದ ಅಭ್ಯರ್ಥಿಗಳು ಸಹ ಇದೇ ಜಾಯಮಾನದವರು ಆದ್ದರಿಂದ ಅವರು ಸಹ ತಾಲೂಕಿನ ಸುತ್ತಮುತ್ತ ಕಾಣಸಿಗುವುದಿಲ್ಲ, ಬದಲಿಗೆ ಮುಳಬಾಗಿಲು ತಾಲೂಕು ಹೊರಗಿನ ಜನರಿಗೆ ಹಾಗೂ ಇಲ್ಲಿನ ಪ್ರಸಕ್ತ ರಾಜಕೀಯ ನಾಯಕರು ಎಂದು ಹೇಳಿಕೊಳ್ಳುವ ಹೆಚ್ಚಿನ ಮಂದಿಗೆ ಮನೆಯಲ್ಲಿ ಸಾಕಿರುವ ನಾಯಿಯಂತೆ ಕಾಣುತ್ತದೆ, ಏಕೆಂದರೆ ಇವರಿಗೆ ಸಮಯ ಸಿಕ್ಕಾಗ ಮಾತ್ರ ತಾಲೂಕಿನಲ್ಲಿ ಕಾಣಿಸಿಕೊಂಡು ನಾಲ್ಕಾರು ಬಿಸ್ಕೆಟ್ ಹಾಕುವಂತೆ ಚಟುವಟಿಕೆಗಳನ್ನು ಮಾಡಿ ಮಾಯವಾಗುತ್ತಾರೆ. . ಇದು ಇಂದಿನ ಮುಳಬಾಗಿಲು ತಾಲೂಕಿನ ಪರಿಸ್ಥಿತಿ, ಇದನ್ನು ಮುಂದುವರಿಸಿ ಹೇಳುವುದಾದರೆ ಇಲ್ಲಿನ ಶಾಸಕರು ಆಗಲಿ ಅಥವಾ ಶಾಸಕ ಅಭ್ಯರ್ಥಿಗಳಾಗಲಿ ಜನರನ್ನು ನಂಬಿಸಲು ಮನೆ ಮಾಡುತ್ತಾರೆ ಆದರೆ ಮನೆಯಲ್ಲಿ ಮನೆಯವರು ಇರುವುದಿಲ್ಲ ಹಾಗೂ ತಾಲೂಕಿನ ಸೇವೆ ಮಾಡಲಿ ಎಂದು ಇವರಿಗೆ ಮನೆ ಕಟ್ಟಿಸಲು ಅವಕಾಶ ಮಾಡಿಕೊಟ್ಟ ಜನರು ಸಹ ಇರುವುದಿಲ್ಲ... ಯಾವ ಭಾಗ್ಯಕ್ಕಾಗಿ ಭಗವಂತ ನಮ್ಮ ತಾಲೂಕಿನ ಜನರನ್ನು ಇಲ್ಲಿ ಹುಟ್ಟಿಸುತ್ತಿದ್ದಾನೆ ಎಂದು ಒಮ್ಮೆ ಯೋಚಿಸಲೇಬೇಕು ಎಂಬುದು ವಿಮರ್ಶಾತ್ಮಕ ವಿಷಯ. ಏಕೆಂದರೆ ಈ ದೇಶಕ್ಕೆ ಮೊದಲ ಪ್ರಶ್ನೆಯಾಗಿ ನನ್ನ ಹಕ್ಕನ್ನು ಕೇಳುವುದಾದರೆ? ನನ್ನ ಜವಾಬ್ದಾರಿಯನ್ನು ಸಹ ನಾನು ನಿಭಾಯಿಸಲೇಬೇಕು ಎಂಬುದು ಸತ್ಯವೇ ಸರಿ.

ಕನಿಷ್ಠಪಕ್ಷ ಹೊರಗಿನಿಂದ ಬಂದ ವ್ಯಕ್ತಿಗಳೇ ಆಗಲಿ ಒಮ್ಮೆ ನಮ್ಮ ತಾಲೂಕಿನ ಜನರು ಅವರನ್ನು ನಾಯಕರು ಎಂದು ಆರಿಸಿದಾಗ ಅವರು ನಮ್ಮವರೇ ಆಗುತ್ತಾರೆ ಏಕೆಂದರೆ ನಾವೆಲ್ಲ ಭಾರತೀಯರು ಎಂಬುದು ನಮ್ಮೆಲ್ಲರ ಮೊದಲ ಧ್ವನಿ... ಆದರೆ ಗೆದ್ದ ನಂತರ ಏಕೆ ತಮ್ಮ ಕುಟುಂಬ ಪರಿವಾರವನ್ನು ಅವರು ತಾಲೂಕಿನ ಜನರೊಂದಿಗೆ ಬಂದು ಬದುಕುವುದಿಲ್ಲ? ಏಕೆ ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲು ಮುಂಬರುವುದಿಲ್ಲ? ಹಾಗಾದರೆ ನಮ್ಮ ತಾಲೂಕಿನ ಸರ್ಕಾರಿ ಶಾಲೆಗಳು ನಮ್ಮ ಶಾಸಕರಿಗೆ ಅಥವಾ ರಾಜಕೀಯ ನಾಯಕರಿಗೆ ಯೋಗ್ಯವಿಲ್ಲವೇ? ಏಕೆ ನಮ್ಮ ತಾಲೂಕು ಅವರ ಮನೆಯ ತಾಯಂದಿರಿಗೆ ಹಾಗೂ ಮಕ್ಕಳಿಗೆ ಸುರಕ್ಷತೆ ಒದಗಿಸುವುದಿಲ್ಲವೇ? ಸಮಸ್ತ ತಾಲೂಕಿನ ಎಲ್ಲಾ ಜನತೆಯ ಪ್ರೀತಿಯ ಶಾಸಕನಾಗಿ ಪ್ರತಿ ಮನೆಯ ಮಗನಾಗಿ ಇರಲಿ ಎಂದು ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಲು ಎಂದು ಕನಿಷ್ಠ ಒಮ್ಮೆಯಾದರೂ ದೇಶಕ್ಕಾಗಿ ದೇಶದ ಜನರೊಂದಿಗೆ ಇರುವೆ ಎಂದು ನಂಬಿ ಉನ್ನತವಾದ ಅಂತಹ ಬೆಲೆಕಟ್ಟಲಾಗದಂತಹ ಸೇವಾ ಚಟುವಟಿಕೆಯ ಪ್ರಥಮ ಹಾಗೂ ಜವಾಬ್ದಾರಿ ಚಟುವಟಿಕೆಯ ಸರ್ವೋತ್ತಮ ಸ್ಥಾನವಾದ ಶಾಸಕನನ್ನಾಗಿ ಮಾಡಲಾಗಿ ಜನರಿಗೆ ಸಿಗಬೇಕಾದ ಮೌಲ್ಯಮಾಪನದ ಫಲ ಇದೆ ಏನು?

ಒಂದು ವೇಳೆ ಈ ಎಲ್ಲ ವಿಷಯಗಳು ಸರಿಯೇ ಆದ ಪಕ್ಷದಲ್ಲಿ, ರಾಜಕೀಯ ಬದಲಾವಣೆ ಅನಿವಾರ್ಯ ಎಂಬುದನ್ನು ಮರೆಯದಿರಿ ಹಾಗೂ ಪ್ರಜೆಗಳೊಂದಿಗೆ ಸಾಮಾನ್ಯವಾಗಿ ನಮ್ಮೂರಿನ ಹುಡುಗನಂತೆ ಅಥವಾ ನಮ್ಮೂರಿನ ಹೆಮ್ಮೆಯ ಮಗಳಂತೆ ಜೀವಿಸಲು ಭಾರತ ಯಾರೇ ಆಗಲಿ ಅಂತಹವರಿಂದ ನಮ್ಮ ತಾಲೂಕಿನ ಜನತೆಗೆ ನ್ಯಾಯ ಸಿಗುವುದು ಅಸಾಧ್ಯ ಎಂದು ಎಲ್ಲರೂ ತಿಳಿಯಬೇಕು, ಈ ಎಲ್ಲ ವಿಷಯಗಳನ್ನು ಅರ್ಥ ಮಾಡಿಕೊಂಡು ಇನ್ನಾದರೂ ಜನ ಮೋಸ ಹೋಗದೆ ಇರುವುದನ್ನು ಕಲಿಯಬೇಕು. ಊಟಕ್ಕೆ ಇಲ್ಲದಿದ್ದರೆ ಅಥವಾ ಮನೆ ಕಟ್ಟಲು ಆಗದಿದ್ದರೆ ಅಥವಾ ನಿಮ್ಮ ಜೀವನ ನಡೆಸಲು ಅಥವಾ ಶೋಕಿ ಮಾಡಲು ನಿಮ್ಮ ಬಳಿ ಹಣ ಇಲ್ಲದಿದ್ದರೆ... ಕಳ್ಳತನ ಮಾಡಿ ಪಕ್ಕದ ತಾಲೂಕುಗಳಲ್ಲಿ ಅಥವಾ ಊರುಗಳಲ್ಲಿ ಪ್ರಯಾಣ ಮಾಡಿ ಹೆಮ್ಮೆಯಿಂದ ಕಳ್ಳತನ ಮಾಡಿ ಅಥವಾ ನಿಮ್ಮ ತಂದೆ ತಾಯಿಗಳ ಆಸ್ತಿ ಇದ್ದರೆ ಮಾರಿಬಿಡಿ ಅವಮಾನವೇನು ಇಲ್ಲ. ಆದರೆ ನಿಮ್ಮ ಮಕ್ಕಳ ಭವಿಷ್ಯವನ್ನು ಸುಭದ್ರ ಗೊಳಿಸುವ ಹಾಗೂ ಅವರ ನೆಮ್ಮದಿ ಮತ್ತು ಉಳಿದ ಜೀವಿತಾವಧಿಯ ಸಮಯವನ್ನು ಗೌರವದಿಂದ ಬದುಕಿಸಲು ಅವಕಾಶ ಕಲ್ಪಿಸುವ ನಮ್ಮ ಭಾರತದ ಸಂವಿಧಾನವನ್ನು ಮತ್ತು ಅದರ ಆಶಯಗಳನ್ನು ದಯಮಾಡಿ ರಾಜಕಾರಣಿಗಳಿಗೆ ಅಥವಾ ಅಭ್ಯರ್ಥಿಗಳಿಗೆ ಮಾರಿಕೊಳ್ಳಬೇಡಿ.

ಒಂದು ವೇಳೆ ನಿಮ್ಮ ಊರಿನ ಶಾಸಕ ನಿಮ್ಮೆಲ್ಲರಿಗೂ ಪರಿಚಿತ ನಿಮ್ಮ ಊರಿನವನೇ ಆದರೆ, ಅವನು ವಿದ್ಯಾವಂತನು ಆಗಿದ್ದರೆ, ಅವನು ಸಮಾಜ ಸೇವಕನೇ ಇರಬೇಕು ಮತ್ತು ಸಮಾಜ ಮಾರುವವನು ಅಲ್ಲದಿದ್ದರೆ, ಅವನ ಆಸ್ತಿಯೇ ಈ ತಾಲೂಕು ಎಂಬ ಭಾವನೆಗೆ ಸೀಮಿತವಾಗಿದ್ದರೆ, ಈ ತಾಲೂಕಿನ ಹೆಣ್ಣು ಮಕ್ಕಳು ತನ್ನ ಸ್ವಂತ ಕುಟುಂಬದ ಹೆಣ್ಣು ಮಕ್ಕಳು ಎಂಬ ಭಾವನೆ ಇದ್ದಿದ್ದರೆ, ಈ ತಾಲೂಕಿನ ಯುವ ಜನತೆ ಹಾಗೂ ಅವರ ಜವಾಬ್ದಾರಿ ನನ್ನ ಕುಟುಂಬದ ಜವಾಬ್ದಾರಿ ಎಂದು ಇದ್ದಿದ್ದರೆ... ಒಮ್ಮೆ ಯೋಚನೆ ಮಾಡಿ ನಮ್ಮ ತಾಲೂಕು ಹಾಗೂ ಅದರ ಭವಿಷ್ಯ ಹೇಗಿರುತ್ತಿತ್ತು ಎಂದು.

ಈಗ ಪ್ರಸಕ್ತ ಎಲ್ಲಿ ನೋಡಿದರು ಯುವ ಪೀಳಿಗೆ ಮಾದಕ ವ್ಯಸನಕ್ಕೆ ವಶವಾಗಿರುವುದು, ಮಾರ್ಗದರ್ಶನದ ಕೊರತೆಯಿಂದ ಯುವ ಪೀಳಿಗೆ ಹಾಳಾಗುತ್ತಿರುವುದು, ಶಾಸಕಾಂಗದ ನಿರ್ವಹಣಾ ಕೊರತೆಯಿಂದ ಕಾರ್ಯಾಂಗ ತುಕ್ಕು ಹಿಡಿದಿರುವುದು. ಈ ಇಷ್ಟೆಲ್ಲ ವಿಷಯಗಳನ್ನು ದಯಮಾಡಿ ಒಮ್ಮೆ ಯೋಚಿಸಿ ನಿರ್ಧಾರ ನಿಮ್ಮದು. ನಿಮ್ಮ ಮುಂದಿನ ಮಕ್ಕಳ ಭವಿಷ್ಯ ನೀವು ಕೂಡಿಟ್ಟ ಹಣದಲ್ಲಿ ಇರುವುದಿಲ್ಲ ಬದಲಿಗೆ ನಿಮ್ಮಿಂದ ಉಳಿಸಿ ಅವರಿಗೆ ಕೊಡಲಾಗುವ ಸುತ್ತಮುತ್ತಲಿನ ವಾತಾವರಣ ಮತ್ತು ಆಡಳಿತದ ಮೇಲೆ ಇರುತ್ತದೆ ಎಂಬುದನ್ನು ಮರೆಯದಿರಿ.

ಹೆಣ್ಣು ಮಕ್ಕಳ ಸುರಕ್ಷತೆ: ಮನೆಯಲ್ಲಿ ಮತ್ತು ಸಮುದಾಯದಲ್ಲಿ ಏನೇ ಆಕ್ರಮಣಗಳು?

ಸಾಮಾಜಿಕ ವಲಯದ ಪ್ರಮುಖ ಜವಾಬ್ದಾರಿಯುತ ವೈಚಾರಿಕತೆಗಳಲ್ಲಿ ವಿಚಾರಿಸುತ್ತಿರುವಾಗಲೂ ಹೆಣ್ಣು ಮಕ್ಕಳ ಸುರಕ್ಷತೆ ಅತ್ಯಂತ ಪ್ರಾಮುಖ್ಯತೆ ಹೊಂದಿದ ವಿಚಾರವಾಗಿದೆ. ಮನೆಯ ಪರಿಸ್ಥಿತಿಗಳಲ್ಲಿಯೇನಾದರೂ, ಸಮುದಾಯದಲ್ಲಿಯೂ ಸಹ ಅಪಾಯದಿಂದ ಅವರನ್ನು ರಕ್ಷಿಸುವುದು ನಮ್ಮ ಹೆಚ್ಚಿನ ಜವಾಬ್ದಾರಿ. ಇಂದಿನ ಘಟ್ಟದಲ್ಲಿ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಾನಿಕಾರಕ ಘಟನೆಗಳ ಬಗ್ಗೆ ನಾವು ಜಾಗೃತರಾಗಿರುವುದು ಅಗತ್ಯವಾಗಿದೆ. ಅನೇಕ ಬಾರಿ, ಮನೆಯಲ್ಲಿ ಮತ್ತು ಸಮುದಾಯದಲ್ಲಿ ನಡೆಯುವ ಅನಾಹುತಗಳಿಗೆ ತಮ್ಮ ಜೀವ ನಿರಂತರವೂ ಮುಳುಗುತ್ತದೆ.

ಹೆಣ್ಣು ಮಕ್ಕಳ ಭದ್ರತೆಗಾಗಿ, ನಮಗೆ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲು ಸಾಧ್ಯವಿದೆ. ಮನೆಮೇಲೆ, ನಿಷೇಧಿತ ಸ್ಥಳಗಳ ತಡೆವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಅಷ್ಟೇ ಅಲ್ಲದೇ, ಅವರೊಂದಿಗೆ ಸಮಾನವಾದ ಮಾನವೀಯತೆ ನೀಡುವುದು ತುಂಬಾ ಮುಖ್ಯ. ವ್ಯಕ್ತಿಕತ್ವ, ಸಮಾನ ಹಕ್ಕುಗಳನ್ನು ಬೆಳೆಸುವುದು ಮತ್ತು ಅವರ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ನೀಡುವುದು ಅನಿವಾರ್ಯ.

ಸಮುದಾಯದ ಮಟ್ಟದಲ್ಲಿ, ಜಾಗೃತಿ ಕಾರ್ಯಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಹೆಣ್ಣು ಮಕ್ಕಳ ಭದ್ರತೆ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಅಂಶವಾಗಿ ನಿಲ್ಲಿಸಿದೆ. ಇದರಿಂದ, ಭವಿಷ್ಯದಲ್ಲಿ ಆಕ್ರಮಣಗಳಿಂದ ರಕ್ಷಿಸಿಬಹುದು. ಇದಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕೌಟುಂಬಿಕ ಬೆಂಬಲವನ್ನು ಉತ್ತೇಜಿಸುವುದು, ಅವರ ಮೇಲ್ಭಾಗದ ಭದ್ರತೆಗೆ ನೆರವಾಗುತ್ತದೆ.

ಹೆಣ್ಣು ಮಕ್ಕಳ ಪರಿಪೂರ್ಣ ಅಭಿವೃದ್ಧಿಗೆ ತಾಂತ್ರಿಕ ಸಾಧನೆಗಳು, ಸಮಾನಷ್ಟರ ಸಮಾನೀಯತೆಯನ್ನು ದೇವೇತರಗೊಳಿಸುವ ಮತ್ತು ಅವರ ಹಕ್ಕುಗಳನ್ನು ಉಳಿಸುವ ಕಾರ್ಯಗಳು ಹೆಚ್ಚು ಮುಖ್ಯ. ಇದರಿಂದ, ಮನೆಯ ಮತ್ತು ಸಮುದಾಯದ ಮಟ್ಟದಲ್ಲಿ ಆಕ್ರಮಣಗಳನ್ನು ತಡೆಯಲು ನಾವು ಶಕ್ತಿಯುತವಾಗಿ ಮುಂದೆ ಬರಬಹುದು.