ಮುಳಬಾಗಿಲಿನಲ್ಲಿ ಯಶಸ್ವಿ ವೈದ್ಯಕೀಯ ಶಿಬಿರ: ಡಾ. ಸಿಎಂ ಪರಮೇಶ್ವರ್ ಅವರ ಸೇವಾ ಚಟುವಟಿಕೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆ ಮತ್ತು ಅನನ್ಯತೆಯನ್ನು ಹೊಂದಿವೆ
ಮುಳಬಾಗಿಲು, 24.11.2024 - ಮುಳಬಾಗಿಲು ನಗರದ ಶಾರದಾ ಮಹಿಳಾ ಕಾಲೇಜಿನಲ್ಲಿ ಇಂದು ಸ್ಮೈಲ್ಸ್ ಆಸ್ಪತ್ರೆಯ ವತಿಯಿಂದ ಪೈಲ್ಸ್ ಮತ್ತು ಪಿಸ್ತೂಲ ವೈದ್ಯಕೀಯ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಶಿಬಿರದಲ್ಲಿ 148 ಜನ ಗಂಡಸರು ಮತ್ತು 68 ಜನ ಮಹಿಳೆಯರು ಭಾಗವಹಿಸಿ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡರು.
Rohan kumar K
11/24/20241 min read


ಮುಳಬಾಗಿಲಿನಲ್ಲಿ ಯಶಸ್ವಿ ವೈದ್ಯಕೀಯ ಶಿಬಿರ
ಮುಳಬಾಗಿಲು, 24.11.2024 - ಮುಳಬಾಗಿಲು ನಗರದ ಶಾರದಾ ಮಹಿಳಾ ಕಾಲೇಜಿನಲ್ಲಿ ಇಂದು ಸ್ಮೈಲ್ಸ್ ಆಸ್ಪತ್ರೆಯ ವತಿಯಿಂದ ಪೈಲ್ಸ್ ಮತ್ತು ಪಿಸ್ತೂಲ ವೈದ್ಯಕೀಯ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಶಿಬಿರದಲ್ಲಿ 148 ಜನ ಗಂಡಸರು ಮತ್ತು 68 ಜನ ಮಹಿಳೆಯರು ಭಾಗವಹಿಸಿ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸ್ಮೈಲ್ ಆಸ್ಪತ್ರೆ ಸಮೂಹದ ಸಂಸ್ಥಾಪಕ ನಿರ್ದೇಶಕರಾದ ಡಾ. ಸಿ ಎಂ ಪರಮೇಶ್ವರ್, ತಮ್ಮ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ಸಮರ್ಪಕತೆಯೊಂದಿಗೆ ತಲುಪಿಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು. ಕಾರ್ಯಕ್ರಮ ದೀಪ ಹಚ್ಚುವ ಮೂಲಕ ಪುಟ್ಟಪರ್ತಿ ಸಾಯಿಬಾಬಾ ಅವರ ಹುಟ್ಟುಹಬ್ಬದ ಆಚರಣೆಯೊಂದಿಗೆ ಪ್ರಾರಂಭವಾಯಿತು.
ಈ ಕಾರ್ಯಕ್ರಮದಲ್ಲಿ ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರೋಹನ್ ಗೌಡ, ಶಾರದಾ ಕಾಲೇಜಿನ ಕಾರ್ಯದರ್ಶಿ ರಮೇಶ್, ನಾಗರೀಕರ ವೇದಿಕೆಯ ಕಾರ್ಯದರ್ಶಿ ರಮೇಶ್ ಬಿ.ಎಂ., ರೋಷನ್ ಟ್ರಸ್ಟ್‌ನ ನಿರ್ದೇಶಕ ಜಬಿವುಲ್ಲ, ನಗರ ಪೊಲೀಸ್ ಆರಕ್ಷಕ ರಾಜಣ್ಣ, ಮುಳಬಾಗಿಲು ಬಿಜೆಪಿ ಮುಖಂಡರಾದ ಕಾಪರ್ತಿ ಅಮರ್ ಮೋಹನ್ ಮತ್ತು ವಾಸು ಅವರುಗಳು ಭಾಗವಹಿಸಿ ಶುಭಕೋರಿದರು.
ಮುಳಬಾಗಿಲು ತಾಲೂಕಿನಲ್ಲಿ ಈ ರೀತಿಯ ಸೇವಾ ಚಟುವಟಿಕೆಗಳು ಇಲ್ಲಿಯವರೆಗೂ ನಡೆದಿಲ್ಲ. ಜನರು ಲಕ್ಷಣಗಳನ್ನು ಗಮನಿಸುವಲ್ಲಿ ವಿಫಲರಾಗುತ್ತಾರೆ ಮತ್ತು ಸರಿಯಾದ ಚಿಕಿತ್ಸೆ ದೊರಕುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇಂತಹ ವಿಷಯಗಳನ್ನು ನೈಜವಾಗಿ ಮಾತನಾಡಲು ಹಿಂಜರಿಕೆ ಹೆಚ್ಚಾಗಿದೆ.
ಸ್ಮೈಲ್ ಸಮೂಹ ಆಸ್ಪತ್ರೆಯ ಸೇವಾರುವರಿಗಳು ಮತ್ತು ತಜ್ಞರಾದ ಡಾ. ಸಿಎಂ ಪರಮೇಶ್ವರ್ ಅವರ ಸೇವಾ ಚಟುವಟಿಕೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆ ಮತ್ತು ಅನನ್ಯತೆಯನ್ನು ಹೊಂದಿವೆ.
ಸಮಾಜದಲ್ಲಿ ತಮ್ಮ ವೈಯಕ್ತಿಕ ಹೆಸರು ಮಾಡುವ ಉದ್ದೇಶದಿಂದ ಅನವಶ್ಯಕವಾಗಿ ವೈದ್ಯಕೀಯ ಕ್ಯಾಂಪ್ಗಳನ್ನು ಮಾಡುತ್ತಿರುವ ವಿಚಾರಗಳು ಸರ್ವೇಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಸಹ ಧೃತಿಗೆಡದೆ ಸಮಾಜಕ್ಕೆ ಸೇವಾ ವ್ಯಾಪ್ತಿಯನ್ನು ತಲುಪಿಸಲು ಗಡಿ ಭಾಗಗಳಾದ ಮುಳಬಾಗಿಲಿನವರೆಗೂ ಚಟುವಟಿಕೆಗಳನ್ನು ಮಾಡುತ್ತಿರುವ ಡಾ. ಸಿಎಂ ಪರಮೇಶ್ವರ್ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.
ನಮ್ಮ ರಾಜ್ಯದಲ್ಲೇ ಹೆಸರುವಾಸಿ ಪೈಲ್ಸ್ ಮತ್ತು ಫಿಸ್ತುಲ ಆಸ್ಪತ್ರೆಯಾಗಿರುವ ಸ್ಮೈಲ್ ಸಮೂಹ, ನಮ್ಮ ತಾಲೂಕಿನಲ್ಲಿ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಿಗೆ ಸೇವಾ ವಿಚಾರವನ್ನು ತಲುಪಿಸಲು 15 ದಿನಗಳಿಂದ ಸತತವಾಗಿ ತಮ್ಮದೇ ಶ್ರಮದಿಂದ ಸಂತೆಗಳಲ್ಲಿ ಮತ್ತು ಹಲವಾರು ನಾಗರಿಕ ವ್ಯಾಪ್ತಿಯ ಪ್ರದೇಶಗಳಿಗೆ ತಮ್ಮದೇ ವಾಹನವನ್ನು ಸರಿ ಹೊಂದಿಸಿ ಜನರಿಗೆ ಜಾಗೃತಿ ಮೂಡಿಸುವಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಇಂತಹ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡಿರುವ ವೈದ್ಯರು ಇಡೀ ಸಮಾಜಕ್ಕೆ ಮಾದರಿಯೂ ಹೌದು ಮತ್ತು ಅವಶ್ಯಕತೆಯೂ ಹೌದು.
Mission
Empowering citizens to uphold democratic values and constitutional rights...
Contact
Join
office@mulbagal.org
© 2024. All rights reserved.
mulbagaltalukcitizensforum@gmail.com
9480563131, 7795200913, 9483663666
BANK ACCOUNT DETAILS:
Name: Mulabagilu Taluku Nagarikara Vadike
Account No: 110191165410
IFSC: CNRB0000769
Branch: Canara Bank Mulbagal Branch